ನನ್ನದೇ ಭೂತಕಾಲವನ್ನು ಸೋಲಿಸುವುದು - ವೈಯಕ್ತಿಕ ಬೆಳವಣಿಗೆ
ನಾನು ಇತ್ತೀಚೆಗೆ ಒಂದು ಆಸಕ್ತಿದಾಯಕ ವಿಚಾರವನ್ನು ಕಂದುಕೊಂಡೆ, ಅದು ಸರಳವಾದ ಹವ್ಯಾಸ ಎಂತಲೂ ಹೇಳಬಹುದು. ಸುಮಾರು ಒಂದು ವರ್ಷದ ಹಿಂದೆ ನಾನು ದಿನಚರಿಯನ್ನು ಬರೆಯಲು ಆರಂಭಿಸಿದೆ. ಮೊದಲಿಗೆ, ನನ್ನನ್ನು ನಾನು ಹಿಡಿದ ಕಾರ್ಯವನ್ನು ಕೊನೆಗೊಳಿಸುವಲ್ಲಿ ಅಷ್ಟು ತುಂಬಾ ಕಷ್ಟಪಡುತ್ತಿದ್ದೆ, ಯಾವಾಗಲೂ ನನ್ನ ಸಾಮರ್ಥ್ಯಗಳಲ್ಲಿ ನಾನೇ ತಪ್ಪುಗಳನ್ನು ಹುಡುಕುತ್ತ, ನನ್ನ ಗುರಿಗಳನ್ನು ಸಾಧಿಸಲು ನಾನು ಸಮರ್ಥನೇ ಎಂದು ನಾನೇ ಎಷ್ಟೋ ಸಲ ಪ್ರಶ್ನಿಸುತ್ತಿದ್ದೆ. ಆದರೆ ನಾನು ದಿನಚರಿಯನ್ನು ಬರೆಯುವ ಕೆಲಸವನ್ನು ಮುಂದುವರಿಸುತ್ತಿದ್ದಂತೆ, ಒಂದು ಆಸಕ್ತಿದಾಯಕ ಸತ್ಯ ಕಂದುಕೊಂಡೆ: ನನ್ನ ಎದುರಾಳಿ ಹೊರಗಿನ ಜಗತ್ತಿನಲ್ಲಿ ಇಲ್ಲ, ಅದು ನಾನೇ.

ಈ ದೃಷ್ಟಿಕೋಣದ ಬದಲಾವಣೆ ಒಂದು ರಾತ್ರಿ ದಿಢೀರನೆ ಸಂಭವಿಸಲಿಲ್ಲ. ದಿನಚರಿಯನ್ನು ಬರೆಯುವುದು ನನ್ನ ದೃಷ್ಟಿಯನ್ನು ಮುಸುಕುಮಾಡಿದ್ದ ಆತ್ಮವಿಶ್ವಾಸದ ಕೊರತೆಯ ಲೇಪಗಳನ್ನು ಸರಿಯುವಂತೆ ಮಾಡಿತು. ಅಂದರೆ ನಿನ್ನೆಯ ಯೋಚನೆ ಅಥವಾ ಯೋಜನೆ ಕಾರ್ಯಗತಗೊಳಿಸುವ ಹಾದಿಯಲ್ಲಿ, ಕಂಡ ಯಶಸ್ಸುಗಳು, ಮತ್ತು ವಿಫಲತೆಯನ್ನು ದಾಖಲಿಸಲು ಪ್ರಾರಂಭಿಸಿದಂತೆ, ಒಂದು ಪುನರಾವರ್ತಿತವಾದ ಒಂದು ಮಾದರಿ ಗೋಚರವಾಗತೊಡಗಿತು—ಪ್ರತಿಯೊಂದು ಪುಟ ನನ್ನ ಪ್ರಗತಿಯ ಪ್ರತಿಬಿಂಬವಾಯಿತು. ನಿಧಾನವಾಗಿ, ನಿಜವಾದ ಪೈಪೋಟಿ ಇತರರೊಂದಿಗೆ ಅಲ್ಲ, ನನ್ನದೇ ಸ್ವಯಂ ಮನಸ್ಸಿನೊಂದಿಗೆ ಎಂಬ ಆಲೋಚನೆಯನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದೆ. ಇದು ನಿನ್ನೆಗಿಂತ ಇಂದು, ಕಳೆದ ವಾರಕ್ಕಿಂತ ಈ ವಾರ, ಅಥವಾ ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮವಾಗಿವುದಕ್ಕೆ ಅಡಿಪಾಯವಾಯಿತು!
ಈ ಆಂತರಿಕ ಪೈಪೋಟಿಯು, ಕೊನೆಯ ಪಾದಯಾತ್ರೆಯ ಸಮಯದಲ್ಲಿ ನನ್ನ ಅನುಭವಕ್ಕೆ ಬಂತು. ಪಾದಯಾತ್ರೆ ಪರಿಚಯವಿಲ್ಲದವರಿಗಾಗಿ ಹೇಳಬೇಕಾದರೆ, ಪಾದಯಾತ್ರೆ ಎಂದರೆ ಒಂದು ಪವಿತ್ರ ಸ್ಥಳದ ಕಡೆಗೆ ಕೈಗೊಳ್ಳುವ ಆಧ್ಯಾತ್ಮಿಕ ನಡೆಯಾಗಿರುತ್ತದೆ. ಪ್ರತೀ ವರ್ಷ, ನಾನು ಈ ಪಯಣವನ್ನು ಬೆಂಗಳೂರಿನಿಂದ ತಿರುಪತಿಗೆ ಮಾಡುತ್ತೇನೆ, ಇದು ನನ್ನ ದೈಹಿಕ ಮತ್ತು ಮಾನಸಿಕ ಸಹನಶಕ್ತಿಯನ್ನು ಪರೀಕ್ಷಿಸುವ ಒಂದು ಸವಾಲಿನ ಅಧ್ಯಾತ್ಮಿಕ ಪ್ರಯಾಣವಾಗಿರುತ್ತದೆ.
ಹಿಂದಿನ ವರ್ಷ, ಆ ಕಷ್ಠದಾಯಕವಾದ ಶ್ರಮ ಪಟ್ಟು ಪಯಣವನ್ನು ಮುಗಿಸಿದ ಬಳಿಕ, ನಾನು ನನ್ನೊಳಗೆ ಒಂದು ನಿರ್ಧಾರ ಕೈಗೊಂಡೆ: ಮುಂದಿನ ಬಾರಿ, ನಾನು ದೈಹಿಕವಾಗಿಯೂ ಹಾಗೂ ಮನಸಿಕವಾಗಿಯೂ ಉತ್ತಮವಾಗಿ ಸಿದ್ಧನಾಗಬೇಕು. ತಕ್ಷಣವೇ ಸಿದ್ಧತೆ ಆರಂಭಿಸಿದೆ. ನನ್ನ ಯೋಜನೆ ಸರಳವಾದದ್ದಾಗಿದ್ದರೂ, ತುಂಬಾ ಕಠಿಣವಾಗಿತ್ತು. ನಾನು ಪ್ರತಿ ದಿನ 5 ರಿಂದ 6 ಕಿಲೋಮೀಟರ್ ನಡಿಗೆ ಮಾಡುವುದನ್ನು ರೂಢಿಸಿಕೊಂಡೆ, ವಾರಾಂತ್ಯದಲ್ಲಿ ಕ್ರಮೇಣ 10 ಕಿಲೋಮೀಟರ್‌ಗಳಿಗೆ ವಿಸ್ತರಿಸುತ್ತಿದ್ದೆ. ಇದನ್ನು ನಾನು ದಿನಚರಿಯಲ್ಲಿ ಸರಿಯಾಗಿ ದಾಖಲಿಸುತ್ತಿದ್ದೆ ಮತ್ತು ಅದರ ನಿಗಾ ಇಟ್ಟು ಗಮನಿಸುತ್ತಿದ್ದೆ. ದೈಹಿಕ ಮತ್ತು ಮಾನಸಿಕ ಸ್ಥಿರತೆ ಪ್ರಧಾನವಾಗಿತ್ತು, ಆದ್ದರಿಂದ ಪಾದಯಾತ್ರೆಯ ಸಂದರ್ಭದಲ್ಲಿ ಎದುರಿಸಬೇಕಾದ ಪರಿಸ್ಥಿತಿಯನ್ನು ಅನುಭವಿಸಲು, ಪ್ರತಿ ದಿನ ಒಂದೇ ಜೋಡಿ ಚಪ್ಪಲಿ ಧರಿಸುತ್ತಿದ್ದೆ.
ದೈಹಿಕ ಸಿದ್ಧತೆ ಕೇವಲ ಒಂದು ಭಾಗ ಮಾತ್ರವಾಗಿತ್ತು. ಈ ಸವಾಲಿಗೆ ನನ್ನ ಮನಸ್ಸನ್ನು ಸಿದ್ಧಗೊಳಿಸಲು, ನಾನು ಧ್ಯಾನವನ್ನು ಅಭ್ಯಾಸ ಮಾಡಲು ಆರಂಭಿಸಿದೆ. ಈ ಅಭ್ಯಾಸದಿಂದ, ನಾನು ಒಳಗಣ ಶಿಸ್ತು ಮತ್ತು ಸಹನೆಯಿಂದ ನನ್ನನ್ನು ನಾನು ತರಬೇತಿಗೊಳಿಸಲು ಸಾಧ್ಯವಾಯಿತು, ಪ್ರಯಾಣದ ಮುಂದೆ ಎದುರಿಸಬೇಕಾದ ಮಾನಸಿಕ ತಾಳ್ಮೆಯನ್ನು ಬೆಳೆಸಲು ಇದು ಸಹಾಯ ಮಾಡಿತು. ನನ್ನ ಮನಸ್ಸನ್ನು ತರಬೇತಿ ಮಾಡುವ ಮೂಲಕ, ಯಾತ್ರೆಯ ಭೌತಿಕ ಕಠಿಣತೆಯನ್ನು ಸಮರ್ಥವಾಗಿ ನಿಭಾಯಿಸಬಹುದೆಂಬ ವಿಶ್ವಾಸವು ನನಗೆ ಹುಟ್ಟಿತು. ಇದೆಲ್ಲ ದಿನಚರಿಯಲ್ಲಿ ದಾಖಲಾಗುತಿತ್ತು ಮತ್ತು ನಿಗಾ ಇಟ್ಟು ಗಮನಿಸಲು ಪ್ರಾರಂಭಿಸಿದೆ.
ಈ ವರ್ಷದ ಪಾದಯಾತ್ರೆಯ ಸಮಯ ಬಂದಾಗ, ನಾನು ಹಿಂದೆಂದಿಗಿಂತಲೂ ಹೆಚ್ಚು ಸಿದ್ಧನಾಗಿದ್ದೆ. ಇತರರೊಂದಿಗೆ ನನ್ನನ್ನು ಹೋಲಿಸುವುದನ್ನು ಬಿಟ್ಟೆ ಅಥವಾ ಎಷ್ಟು ಬೇಗ ಈ ಪ್ರಯಾಣವನ್ನು ಪೂರ್ಣಗೊಳಿಸಬಲ್ಲೆ ಎಂಬ ಚಿಂತೆಯನ್ನು ಬಿಟ್ಟೆ, ನಾನು ನನ್ನ ಹಿಂದಿನ ಸ್ವರೂಪದೊಂದಿಗೆ ಪೈಪೋಟಿ ಮಾಡುವುದರ ಬಗ್ಗೆ ಗಮನ ಕೊಟ್ಟೆ. ನನ್ನ ಗುರಿ ಮತ್ತು ಉದ್ದೇಶ ಸರಳವಾಗಿತ್ತು. ನನ್ನ ಹಿಂದಿನ ವರ್ಷದ ನನ್ನ ಸ್ವರೂಪಕ್ಕಿಂತ ಈ ವರ್ಷ ಶಕ್ತಿಶಾಲಿ ಹಾಗೂ ಸಹನಶೀಲತೆಯನ್ನು ರೂಢಿಸಿಕೊಳ್ಳುವುದು.
ಫಲಿತಾಂಶಗಳು ಅಚ್ಚರಿಗೊಳಿಸಿತ್ತು. ನಾನು ಯಾತ್ರೆಯನ್ನು ಹೆಚ್ಚು ಸುಲಭವಾಗಿ ಪೂರ್ಣಗೊಳಿಸುವುದಲ್ಲದೆ, ಆಂತರಿಕ ತೃಪ್ತಿಯೂ ಅನುಭವಿಸಿದೆ. ನಾನು ಬೆಳೆಸಿಕೊಂಡ ಮಾನಸಿಕ ಮತ್ತು ದೈಹಿಕ ಸಹನಶಕ್ತಿ, ಸ್ವಯಂ ಪೈಪೋಟಿಯ ಶಕ್ತಿಗೆ ಸಾಕ್ಷಿಯಾಗಿತ್ತು. ನಾನು ನನ್ನ ಹಳೆಯ ಸ್ವಯಂವನ್ನು ಮೀರಿ ಹೊಸ ಗುರಿ ಅಥವಾ ಉದ್ದೇಶವನ್ನು ಸಾಧಿಸಬಹುದೆಂಬುದನ್ನು ಅರಿತುಕೊಂಡೆ, ಮತ್ತು ಭವಿಷ್ಯದಲ್ಲಿ ನನ್ನ ಇನ್ನೂ ಉತ್ತಮ ಮತ್ತು ಎತ್ತರದ ಮಾನದಂಡವನ್ನು ನಿಗದಿಗೊಳಿಸಲು ಆತ್ಮವಿಶ್ವಾಸ ಕಂದುಕೊಂಡೆ.
ಈ ಅನುಭವವು ಒಂದು ಮಹತ್ವದ ಪಾಠವನ್ನು ಇನ್ನಷ್ಟು ದೃಢಗೊಳಿಸಿತು:
ನಿಜವಾದ ಬೆಳವಣಿಗೆ ಅಂತರಂಗದಲ್ಲಿ ಆಗುತ್ತದೆ. ಹೊರಗಣ ಸಾಧನೆಗಳು ಮುಖ್ಯವಾದರೂ, ಅತೀ ಮಹತ್ವದ ಪ್ರಗತಿ ಆಗುವುದು ನಾವೇ ನಮ್ಮನ್ನು ಹಿಂದಿಗಿಂತಲೂ ಉತ್ತಮಗೊಳ್ಳಲು ಸವಾಲು ಹಾಕಿದಾಗ ಮಾತ್ರ. ದಿನಚರಿಯನ್ನು ಬರೆಯುವುದು ನನಗೆ ಈ ವೈಯಕ್ತಿಕ ಪರಿವರ್ತನೆಯ ಸಾಧನವಾಗಿದ್ದು, ನನ್ನ ಪ್ರಗತಿಯನ್ನು ಪರಿಶೀಲಿಸಲು, ನನ್ನ ಶಕ್ತಿಯ ಅಂಶಗಳನ್ನು ಗುರುತಿಸಲು ಮತ್ತು ನನ್ನ ದೌರ್ಬಲ್ಯಗಳನ್ನು ತಿದ್ದಲು ಸಹಾಯಕವಾಗಿದೆ.
ಈ ನನ್ನ ದಿನಚರಿಯ ಪಯಣವನ್ನು ಹಿಂದಿರುಗಿ ನೋಡಿದಾಗ, ನಾನು ಇವತ್ತಿನ ನನ್ನನ್ನು ಕಂಡು ತೃಪ್ತಿಯಾಗುತ್ತದೆ. ಏಕೆಂದರೆ ನಿನ್ನೆಗಿಂತ ಇಂದು ನಾನು ಉತ್ತಮನಾಗಿರುವುದರಿಂದ. ಮತ್ತು ಸ್ವಯಂ-ಹಿಡಿತದ ಒಂದು ಪ್ರಯಾಣದ ಒಂದು ಪ್ರಾರಂಭ. ನಿಮ್ಮ ಅನಿಸಿಕೆ ಏನು? ನನ್ನೊಡನೆ ಹಂಚಿಕೊಳ್ಳಿ.
#ಆತ್ಮನಿಗ್ರಹ #ದಿನಚರಿದಾಖಲೆ #ವೈಯಕ್ತಿಕವಿಕಾಸ #ಪಾದಯಾತ್ರೆ #ಆತ್ಮಪೈಪೋಟಿ #ಮಾನಸಿಕತಾಳ್ಮೆ #ದೈಹಿಕಸಹನಶಕ್ತಿ #ಆಧ್ಯಾತ್ಮಿಕಪ್ರಯಾಣ #ಆಂತರಿಕಬಲ