ಮನಸ್ಸಿನ Mind OS ಮಾಲ್ವೇರ್: ಹಾನಿಕಾರಕ ಯೋಚನಾ ಮಾದರಿಗಳನ್ನು ಹೇಗೆ ಗುರುತಿಸಿ ತೆರವುಗೊಳಿಸಬೇಕು

ಒಮ್ಮೆ ಯೋಚಿಸಿ ಹಾಗೂ ನಿಮ್ಮನ್ನು ನೀವೇ ಕೇಳಿಕೊಳ್ಳಿ: ನನ್ನ ಮನಸ್ಸಿನಲ್ಲಿ ಯಾವ ಯಾವ ಪ್ರೋಗ್ರಾಮ್‌ಗಳು ನಡೆಯುತ್ತಿವೆ? ಅವು ನನಗೆ ಸಹಾಯ ಮಾಡುತ್ತಿವೆಯೋ ಅಥವಾ ನನ್ನ ಆಂತರಿಕ ಶಾಂತಿಯನ್ನು ಕದಡುತ್ತಿರುವ ಮಾಲ್ವೇರ್‌ನಂತೆ ಕೆಲಸ ಮಾಡುತ್ತಿವೆಯೋ?

ನಮ್ಮ ಮನಸ್ಸು, ಕಂಪ್ಯೂಟರ್‌ನಂತೆ, ಒಂದು ಆಂತರಿಕ ವ್ಯವಸ್ಥೆ ಮೇಲೆ ಕಾರ್ಯನಿರ್ವಹಿಸುತ್ತದೆ—ನಾವು ಅದನ್ನು ಮನಸ್ಸಿನ Mind OS ಎಂದು ಕರೆಯೋಣ. mindOS- ನಾವು ಹುಟ್ಟಿದ ಕ್ಷಣದಿಂದಲೇ, ಹೊರಗಿನ ಪ್ರಭಾವಗಳು—ಕುಟುಂಬ, ಸಂಸ್ಕೃತಿ, ಶಿಕ್ಷಣ, ಸ್ನೇಹಿತರು ಮತ್ತು ಸಮಾಜ—ಈ Mind OS‌ನಲ್ಲಿ ವಿವಿಧ “ಪ್ರೋಗ್ರಾಮ್‌"ಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತವೆ. ನಾವು ಬೆಳೆದಂತೆ, ಹೆಚ್ಚು ಹೆಚ್ಚು ಪ್ರೋಗ್ರಾಮ್‌ಗಳು ಸ್ಥಾಪಿಸಲ್ಪಡುತ್ತವೆ, ಇವುಗಳು ನಮ್ಮ ನಂಬಿಕೆಗಳನ್ನು, ವರ್ತನೆಗಳನ್ನು ಮತ್ತು ಅಂತರಂಗದ ದೃಷ್ಟಿಕೋನವನ್ನು ರೂಪಿಸತೊಡಗುತ್ತವೆ.

ನಮ್ಮ ಮನಸ್ಸು, ಕಂಪ್ಯೂಟರ್‌ಗಳಂತೆ, ಒಂದು ಆಂತರಿಕ ವ್ಯವಸ್ಥೆ ಮೇಲೆ ಕಾರ್ಯನಿರ್ವಹಿಸುತ್ತದೆ

ನಾವು ಎಂದಾದರೂ ಈ ಪ್ರಶ್ನೆಯನ್ನು ನಮ್ಮಲ್ಲಿ ಕೇಳಿದ್ದೇವೆಯೇ?: ನಮ್ಮ ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪರಿಶೀಲಿಸುವ ಪ್ರಯತ್ನ ಮಾಡಿದ್ದೇವೆಯೇ?

ನಿಮ್ಮ ಮನಸ್ಸಿನ mindOSನಲ್ಲಿ ಎಂತೆಂತಹ ಪ್ರೋಗ್ರಾಮ್ ಇನ್ಸ್ಟಾಲ್ ಮಾಡಿಕೊಂಡಿದ್ದೀರ?

ನಿಮ್ಮ ಮನಸ್ಸನ್ನು ನಿರಂತರವಾಗಿ ನವೀಕರಿಸುತ್ತಿರುವ ಮತ್ತು ಸ್ಥಾಪಿಸುತ್ತಿರುವ ಕಂಪ್ಯೂಟರ್‌ನಂತೆ ಕಲ್ಪಿಸಿಕೊಳ್ಳಿ. ಈ ಪ್ರೋಗ್ರಾಮ್‌ಗಳಲ್ಲಿನ ಕೆಲವು ಖಂಡಿತ ಅನುಕೂಲಕರವಾಗಿರುತ್ತದೆ: ನೀವು ಕಲಿಯುವ ಜೀವನ ಪಾಠಗಳು, ನಿಮ್ಮಲ್ಲಿರುವ ಮೌಲ್ಯಗಳು ಮತ್ತು ನಿಮ್ಮಲ್ಲಿ ಬೆಳೆಸಿಕೊಂಡ ಉತ್ತಮ ಹವ್ಯಾಸಗಳು ಅಥವಾ ಅಭ್ಯಾಸಗಳಾಗಿರಬಹು. ಇವುಗಳನ್ನು ನಂಬಬಹುದಾದ ಸಾಫ್ಟ್‌ವೇರ್‌ಗಳಂತೆ, ನಿಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ಇದರ ಜೊತೆ ಜೊತೆಯಲ್ಲಿಯೇ ಇತರ ಪ್ರೋಗ್ರಾಮ್‌ಗಳ ಇರಬಹುದು ಅಲ್ಲವೇ? ನೀವು ಚಿಂತಿಸುತ್ತಿರುವ ನಂಬಿಕೆಗಳು, ಭಯಗಳು, ಸಾಮಾಜಿಕ ಒತ್ತಡಗಳು ಮತ್ತು ನಕಾರಾತ್ಮಕ ಯೋಚನೆಗಳು. ಇವುಗಳೇ ಮಾಲ್ವೇರ್, ಈ ಮಾಲ್ವೇರ್ ಗಳು ನಮ್ಮ ಗಮನಕ್ಕೇ ಬಾರದಂತೆ ನಮ್ಮ ಜೀವನದ ಪ್ರತಿ ನಡೆ-ನುಡಿಗಳನ್ನು ನಿರ್ವಹಿಸುತ್ತಿರುತ್ತವೆ.

ಸ್ವಲ್ಪ ಯೋಚನೆ ಮಾಡಿ ನೋಡಿ. ನಿಮ್ಮ ಜೀವನದಲ್ಲಿ ಯಾವುದಾದರೂ ಯೋಚನೆಗಳು ಅಥವಾ ವರ್ತನೆಗಳು ಸ್ವಯಂಚಾಲಿತವಾಗಿ ನಿಮ್ಮ ಅರಿವಿಲ್ಲದೆಯೇ ನಿಮ್ಮ ಮನದಲ್ಲಿ ಉದ್ಭವಿಸುತ್ತಿರುವಂತೆ ಅನಿಸುತ್ತಿದೆಯೇ? ನಿಮಗೆ ಯಾವುದಾದರೂ ಸಂದರ್ಭದಲ್ಲಿ ನಿಮಗೇ ಅರಿವಿಗೆ ಬಾರದಂತೆ ಅಭ್ಯಾಸಬಲದಿಂದಲೋ ಅಥವಾ ಆತಂಕದ ನೆಲೆಯಿಂದಲೋ ಪ್ರತಿಕ್ರಿಯಿಸುತ್ತಿದ್ದೀರಾ? ನಿರಂತರ ಧನಾತ್ಮಕ ಆಲೋಚನೆಗಳು ಅಥವಾ ಒಳಗಣ ಸಂಭಾಷಣೆಗಳು ನಿಮ್ಮ ಮನದಲ್ಲಿ ಬೆಂಬಿಡದೆ ಕಾಡುತ್ತಿವೆಯೇ? ಹಾಗಾದರೆ ಇವುಗಳು ನೀವು ಶುಚಿಗೊಳಿಸಬೇಕಾದ ಹಾನಿಕಾರಕ ಪ್ರೋಗ್ರಾಮ್‌ಗಳ ಲಕ್ಷಣಗಳಾಗಿರಬಹುದು.

ನಾವು ಪ್ರಶ್ನಿಸುತ್ತಿಲ್ಲವೇಕೆ ?

ನಮ್ಮಲ್ಲಿ ಬಹುತೇಕ ಜನರು ನಾವು ಅನುಸರಿಸುತ್ತಿರುವ 'ಪ್ರೋಗ್ರಾಮ್'ಗಳನ್ನು ಪ್ರಶ್ನಿಸುತ್ತಿಲ್ಲ. ಜೀವನದಲ್ಲಿ ತನ್ನಂತಾನೇ ಹೊಳೆಯುವ ಯೋಚನೆಗಳು (ನೋಟಿಫಿಕೇಷನ್‌ಗಳು ಇದ್ದಂತೆ) ಅದು ಉದ್ಭವಿಸುತ್ತಿದ್ದಂತೆ ಅಥವಾ ಎದುರಾಗುತ್ತಿದ್ದಂತೆಯೇ ಅದನ್ನು ಪ್ರಶ್ನಿಸದೆ ಪ್ರತಿಕ್ರಿಯಿಸುತ್ತೇವೆ— ಅವು ನಮಗೆ ಸಹಾಯ ಮಾಡುತ್ತಿವೆಯೋ ಅಥವಾ ನಮ್ಮನ್ನು ನಾಶದ ಕಡೆಗೆ ಕೊಂಡೊಯ್ಯುತಿವೆಯೋ ಎಂದು ಯೋಚಿಸುತ್ತಲೇ ಇಲ್ಲ.

ಸ್ವಲ್ಪ ಸಮಯ ನಿಂತು ಚಿಂತಿಸೊಣ: ನಿಮ್ಮ ಮನದಲ್ಲಿ ಯಾವ ಯೋಚನೆಗಳು ತನ್ನಂತಾನೇ ಮರುಕಳಿಸಿ ಬರುತ್ತಿವೆ ಎಂದು ಯೋಚಿಸಿ. ಅವು ನಿಮಗೆ ಸಹಾಯಕವೇ ಅಥವಾ ಕಳವಳ, ಹತಾಶೆ ಅಥವಾ ಸ್ವಯಂ-ಅನುಮಾನಗಳನ್ನು ಉಂಟುಮಾಡುತ್ತಿವೆಯೇ? ಈ ಯಾಂತ್ರಿಕ ಯೋಚನೆಗಳ ಮೂಲ ಮತ್ತು ಪರಿಣಾಮಗಳನ್ನು ಪ್ರಶ್ನಿಸದೆಯೇ ಎಷ್ಟೋ ಸಲ ಅನುಸರಿಸಿ ನೀವು ಅವುಗಳು ಹೇಳಿದಂತೆ ನಡೆದುಕೊಳ್ಳುತ್ತಿದ್ದೀರ ಅಲ್ಲವೇ?

ಈ ಪ್ರೋಗ್ರಾಮ್‌ಗಳು ಕೆಲವು ಹಳೆಯದಾಗಿರುತ್ತದೆ, ನಮ್ಮ ಎಚ್ಚರಿಕೆಯ ಹೊರತಾಗಿಯೂ ತುಂಬಾ ಹಿಂದೆಯೇ ಸ್ಥಾಪಿಸಲ್ಪಟ್ಟಿರುತ್ತವೆ. ಹಳೆಯ ಸಾಫ್ಟ್‌ವೇರ್‌ನಂತೆ, ಅವು ನಮ್ಮನ್ನು ನಿಧಾನಗತಿಯಲ್ಲಿ ನಡೆಯುವಂತೆ ಮಾಡಿ, ತಪ್ಪುಗಳನ್ನು ಮಾಡುವಂತೆ ಪ್ರೇರೇಪಿಸುತ್ತವೆ, ಇಲ್ಲವೇ ನಮ್ಮ ಅಂತರಂಗದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬಹುದು ಅಥವಾ ಸಂಪೂರ್ಣ ನಾಶಪಡಿಸುತ್ತವೆ.

ಅಂತರಂಗದ ಈ ಮಾಲ್ವೇರ್ ಗಳನ್ನು ತೆರವುಗೊಳಿಸಲು ಇದು ಸರಿಯಾದ ಸಮಯ

ಇದು ನಿಮಗೆ ಶುಭಸಮಾಚಾರ ಎನಿಸಬಹುದು: ಎದೆಲ್ಲವನ್ನು ನಿಮ್ಮ ಹತೋಟಿಗೆ ತಂದುಕೊಳ್ಳಬಹುದು.. ನಾವು ನಮ್ಮ ಯೋಚನೆಗಳನ್ನು, ನಿರ್ಧಾರಗಳನ್ನು ನಿರಂತರವಾಗಿ ಹಾಗೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ನಮ್ಮ mindos ನಲ್ಲಿ ನಮ್ಮನ್ನು ಹಾನಿಮಾಡುತ್ತಿರುವ ಪ್ರೋಗ್ರಾಮ್‌ಗಳನ್ನು ನಾವು ಕಂಡುಕೊಳ್ಳಬಹುದು. ಆ ನಂತರ ನಾವು ಏನು ಮಾಡಬಹುದು?

ನಿಮ್ಮ ಮನಸ್ಸನ್ನು ನಿಮ್ಮ ಅರಿವಿಲ್ಲದೆಯೇ ಹಾನಿಮಾಡುತ್ತಿರುವ ಮಾಲ್ವೇರ್ ಗಳನ್ನು ಗುರುತಿಸಿಕೊಂಡ ಬಳಿಕ, ಅವುಗಳನ್ನು ತೆರವುಗೊಳಿಸುವಂತಹ ಕಾರ್ಯವನ್ನು ಆರಂಭಿಸಬೇಕು. ಆದರೆ ಹೇಗೆ?

ಭಗವದ್ಗೀತೆ: ನಿಮ್ಮ ಮನಸ್ಸಿನ ಆಂಟಿವೈರಸ್

ಭಗವದ್ಗೀತೆ ಮನಸ್ಸಿನ mind OSಗೆ ಸೂಕ್ತವಾದ ಆಂಟಿವೈರಸ್‌ ಆಗಿದೆ. ಇದು ನಮ್ಮ ನಕಾರಾತ್ಮಕ ಯೋಚನೆಗಳು, ಆತಂಕಗಳು ಮತ್ತು ಭಯಗಳನ್ನು ತೊಡೆದುಹಾಕುವ ಮೂಲಕ ನಮ್ಮ ಮನಸ್ಸಿನ ಶುದ್ಧೀಕರಣ ಮಾಡಲು ಸಹ ಸಹಾಯ ಮಾಡುತ್ತದೆ. ದೈವೀಕ ಜೀವನದತ್ತ ನಮ್ಮನ್ನು ಮುನ್ನಡೆಸಲು ಅದು ಮಾರ್ಗದರ್ಶನ ನೀಡುತ್ತದೆ.

ಗೀತೆಯು ನಮಗೆ ನಮ್ಮ ಮನಸ್ಸನ್ನು ನಿರಂತರ ಗಮನಿಸುತ್ತಾ, ನಮ್ಮನ್ನು ನಾವು ಅರಿತು ನಂತರ ನಮಗೆ ಮುಂದುವರೆಯಲು ಪ್ರೇರೇಪಣೆ ನೀಡುತ್ತದೆ, ಹಾಗು ನಮ್ಮ ಅಂತರಂಗದ ವ್ಯವಸ್ಥೆಯಲ್ಲಿರುವ ವೈರಸ್‌ಗಳಂತೆ ಕಾರ್ಯನಿರ್ವಹಿಸುವ ಬಂಧನಗಳು ಮತ್ತು ಭಯಗಳನ್ನು ತೆರವುಗೊಳಿಸುವುದು ಹೇಗೆ ಎಂಬುದನ್ನು ಬೋಧಿಸುತ್ತದೆ. ಗೀತೆಯ ಜ್ಞಾನವನ್ನು ನಮ್ಮ ಮನಸ್ಸಿನ mindOS ನಲ್ಲಿ ಅನುಸ್ಥಾಪಿಸಿದರೆ, ನಾವು:

  • ಹಾನಿಕಾರಕ ಪ್ರಭಾವಗಳನ್ನು ತೆರವುಗೊಳಿಸಿ: ಪ್ರತಿಷ್ಠೆಯ ನೆಲೆಯಿಂದ ಉದ್ಭವಿಸುವ ಕಾಮನೆಗಳನ್ನು ಹಾಗು ನಕಾರಾತ್ಮಕ ಯೋಚನೆಗಳನ್ನು ಕ್ರಮೇಣ ಕಡಿಮೆ ಮಾಡಕೊಳ್ಳಬಹುದು.
  • ನಿಮ್ಮ ಮನಸ್ಸಿನ ಫೈರ್ ವಾಲ್ ನ್ನು ಸದೃಢಗೊಳಿಸಬಹುದು: ಗೀತೆಯಲ್ಲಿನ ಪ್ರಮುಖ ಉಪದೇಶಗಳಾದಂತಹ ಕರ್ಮಯೋಗ (ನಿಸ್ವಾರ್ಥ ಕಾರ್ಯಗಳು) ಹಾಗು ಭಕ್ತಿ ಯೋಗ (ಅರ್ಪಣ ಮನೋಭಾವ), ಧೃಢತೆ, ಶಾಂತಿ ಹಾಗು ಮನಸ್ಸಿಗೆ ಸ್ಪಷ್ಟತೆಯನ್ನು ಒದಗಿಸುತ್ತದೆ.
  • ನಿಮ್ಮ ಸಹಜ ಸ್ವಭಾವದತ್ತ ಮರಳಿ:ಮಾಲ್ವೇರ್ ದೂರವಾದ ಮೇಲೆ, ನಿಮ್ಮ mind OS ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಕಾರ್ಯ ನಿರ್ವಹಿಸುತ್ತದೆ, ಇದು ನಿಮ್ಮ ಒಳಗಣ ಶಾಂತತೆಯನ್ನು ಕ್ರಮೇಣ ಹೆಚ್ಚಿಸುತ್ತದೆ.

ನೀವು ನಿಮ್ಮ mind OS ನವೀಕರಣಕ್ಕೆ ಸಿದ್ಧರಾಗಿರುವಿರೇ?

ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಪ್ರೋಗ್ರಾಮ್‌ಗಳನ್ನು ನೋಡಿದಾಗ, ಅವುಗಳು ನಿಮ್ಮ ಬದುಕಿಗೆ ಅನುಕೂಲವಾಗಿವೆಯೇ ಅಥವಾ ಕಷ್ಟವನ್ನು ಉಂಟುಮಾಡುತ್ತಿವೆಯೇ ಎಂದು ಪ್ರಶ್ನಿಸಲು ಸಮಯ ಬಂದಿದೆ. ಭಗವದ್ಗೀತೆಯಂತಹ ಮಾರ್ಗದರ್ಶಕ ಗ್ರಂಥವು ನಮ್ಮ ಮನಸ್ಸನ್ನು ಶುದ್ಧೀಕರಣ ಮಾಡಿ ನಾವು ದೈವೀಕ ಜೀವನದತ್ತ ಸಾಗಲು ಅನುವು ಮಾಡುತ್ತದೆ.

ಸ್ವಯಂ ಅರಿವಿನತ್ತ ಮೊದಲ ಹೆಜ್ಜೆ ಇಡಿ. ನಿರಂತರವಾಗಿ ಗಮನ ಇಟ್ಟು ಮುಂದುವರೆಸಿದಂತೆ, ಕ್ರಮೇಣ ಯಾವ ಪ್ರೋಗ್ರಾಂಗಳನ್ನು ತೆಗೆದುಹಾಕಬೇಕೆಂದು ನೀವೇ ಅರ್ಥಮಾಡಿಕೊಳ್ಳುತ್ತೀರಿ. ಭಗವದ್ಗೀತೆಯ ಜ್ಞಾನವು ಮಾರ್ಗದರ್ಶಕವಾಗಿದ್ದು, ನಿಮ್ಮಲ್ಲಿನ ನಕಾರಾತ್ಮಕ ಪ್ರಭಾವಗಳನ್ನು ತೊರೆದು ಹಾಗು ದೈವೀಕ ಜೀವನದತ್ತ ಸರಾಗವಾಗಿ ಸಾಗಲು ಅನುಕೂಲವಾಗುತ್ತದೆ.

ಚಿತ್ರ ಕೃಪೆ rawpixel.com on Freepik

ನಿಮಗೆ ಇವುಗಳು ಕೂಡ ಇಷ್ಟ ಆಗಬಹುದು...

ನಿಮ್ಮ ಅನಿಸಿಕೆ ಹೇಳಿ

Your email address will not be published. Required fields are marked *

knಕನ್ನಡ
Open chat
1
Hello 👋
Can we help you?