ಅನಿಶ್ಚಿತತೆಗಳಲ್ಲಿ ವಿಶ್ವಾಸ ಎಂಬ ಶಕ್ತಿ: ಒಬ್ಬ ಬಾಲಕನಿಂದ ಪಾಠ
ಒಂದು ಹಳ್ಳಿ, ಮಳೆ ಬಾರದ ಕಾರಣ ಬರದ ಛಾಯೆ ಆವರಿಸಿತ್ತು. ಈ ಸಂಕಷ್ಟದಿಂದ ಹೊರಬರಲು, ಹಳ್ಳಿಯ ಜನರು ಮಳೆ ದೇವರಾದ ವರುಣನನ್ನು ಪ್ರಾರ್ಥಿಸಲು ದೇವಾಲಯಕ್ಕೆ ಹೋಗಲು ತೀರ್ಮಾನಿಸಿದರು. ಎಲ್ಲರೂ ಒಟ್ಟಾಗಿ ಪೂಜೆ ಮಾಡೋಕೆ ಹೊರಟರು.
ಆ ದಟ್ಟ ಜನಸಮೂಹದಲ್ಲಿ ಒಬ್ಬ ಪುಟ್ಟ ಬಾಲಕ ಕೂಡ ಇದ್ದ. ಅವನ ಪುಟ್ಟ ಕೈಯಲ್ಲಿ ಒಂದು ಕೊಡೆ ಹಿಡಿದು ನಡೆಯುತ್ತಿದ್ದ, ಅಲ್ಲಿನ್ನೂ ಮಳೆಯ ನಿಶಾನೆಯೇ ಇಲ್ಲ, ಆದರೆ ಅವನಿಗೆ ಪೂರ್ಣ ಧೃಢ ನಂಬಿಕೆ ಇತ್ತು—ಮಳೆ ಬರುವುದು ಖಚಿತ. ಅವನು ಆ ಕೊಡೆಯನ್ನು ಮಳೆ ಸುರಿಯುವುದಕ್ಕೆ ತಯಾರಿ ಮಾಡಿಕೊಂಡಂತೆ ಹಿಡಿದು ನಡೆಯುತ್ತಿದ್ದ.
ಈ ಸಣ್ಣ ಕತೆ ತುಂಬಾ ಸಾಧಾರಣವಾದುದು ಎಂದೆನಿಸಬಹುದು, ಆದರೆ ಒಂದು ವಿಶ್ವಾಸದಲ್ಲಿ ಎಷ್ಟು ಆಳವಾದ ಶಕ್ತಿಯಿರುವುದು ಎಂಬುದರ ಹೃದಯಸ್ಪರ್ಶಿ ಪಾಠವನ್ನು ನಮ್ಮೆಲ್ಲರಿಗೂ ತಿಳಿಸಿಕೊಡುತ್ತದೆ. ಆ ಬಾಲಕನು ಕೇವಲ ಮಳೆಯ ಬರುವ ನಿರೀಕ್ಷೆಯಲ್ಲ, ಬಂದೇ ಬರುತ್ತದೆ ಎನ್ನುವ ಖಚಿತ ವಿಶ್ವಾಸದಿಂದ ತಯಾರಾಗಿದ್ದ.
ನಮ್ಮ ಜೀವನದಲ್ಲಿಯೂ ಇದೇ ತರಹದ ಸನ್ನಿವೇಶಗಳು ಎದುರಾಗುತ್ತವೆ. ಅನಿಶ್ಚಿತತೆಗಳು, ಸಂಕಷ್ಟಗಳು, ನಾವು ಮುಂಡುವರೆಯುತ್ತಾ ಹೋದಂತೆ ಹಠಾತ್ ತಡೆಗಳು ಬರುತ್ತವೆ. ಆದರೆ ವಿಶ್ವಾಸ ಎನ್ನುವುದು— ಒಮ್ಮೆ ಇದ್ದಾಗ, ನೀವು ಆ ಬೆಳಕನ್ನು ಕಾಣದಿದ್ದರೂ, ಅದರತ್ತ ಮುನ್ನಡೆಯುವ ಶಕ್ತಿಯನ್ನು ಕೊಡುತ್ತದೆ.

ವಿಶ್ವಾಸ ಎನ್ನುವುದು ಯಾವುದಕ್ಕೂ ಸೀಮಿತವಾಗಿಲ್ಲ; ಅದು ನಮ್ಮ ವೃತ್ತಿ, ವೈಯಕ್ತಿಕ ಬೆಳವಣಿಗೆ, ಅಥವಾ ದೈವೀಕ ನಂಬಿಕೆಗಳಲ್ಲಿಯೂ ಇರಬಹುದು. ವಿಶ್ವಾಸ ಅಂದರೆ ಕೇವಲ ಬಯಸುವುದಲ್ಲ; ದಾರಿ ಸ್ಪಷ್ಟವಾಗದಿದ್ದರೂ, ಅದಕ್ಕೆ ಸಿದ್ಧವಾಗುವುದು. ಧೃಢತೆಯಿಂದ ಮುಂದೆ ಹೆಜ್ಜೆ ಇಡುವುದು, ಎಲ್ಲವೂ ಸರಿಯಾಗಿ ನಡೆದೇ ತೀರುತ್ತದೆ ಎಂಬ ಸಂಪೂರ್ಣ ಭರವಸೆಯಿಂದ ಮುಂದುವರೆಯುವುದು.
ನಿಮ್ಮ ಜೀವನದಲ್ಲಿ ಈ ಪಾಠವನ್ನು ಇಂದಿನಿಂದಲೇ ಅಳವಡಿಸಿಕೊಳ್ಳಬಹುದು:
- ನಂಬಿಕೆಯಿಂದ ಕಾರ್ಯಪ್ರವೃತ್ತರಾಗಿ: ನಿಮ್ಮ ವೃತ್ತಿಯಾಗಿರಲಿ, ವೈಯಕ್ತಿಕ ಬೆಳವಣಿಗೆಯಿರಲಿ ಅತ್ಯವೆ ಸಂಬಂಧಗಳಿರಲಿ ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ. ಫಲಗಳು ನಿಮ್ಮ ದೃಷ್ಟಿಗೆ ಗೋಚರವಾಗದೇ ಇರಬಹುದು ಆದರೆ ಬಂದೇ ತೀರುತ್ತದೆ ಎನ್ನುವ ವಿಶ್ವಾಸ ಇರಲಿ.
- ಯಶಸ್ಸಿಗೆ ಸಿದ್ಧರಾಗಿ: ಆ ಪುಟ್ಟ ಬಾಲಕ ಕೊಡೆ ಹಿಡಿದು ಮಳೆ ಬರುವುದಕ್ಕೆ ತಯಾರಾಗಿದ್ದಂತೆ, ನೀವು ನಿಮ್ಮ ಗುರಿಗಳನ್ನು ಸಾಧಿಸುವುದು ಖಚಿತ ಎಂಬಂತೆ ಅಚಲವಾದ ಆತ್ಮವಿಶ್ವಾಸದಿಂದ ತಯಾರಾಗಿರಿ.
- ಪಾಯನದಲ್ಲಿ ನಂಬಿಕೆಯಿರಲಿ: ತಕ್ಷಣದ ಫಲಗಳು ನಿಮ್ಮ ಅನುಭವಕ್ಕೆ ಬರದೇ ಇದ್ದರೂ, ನಿಮ್ಮ ಶ್ರಮವು ಫಲ ನೀಡುತ್ತದೆ ಎಂಬ ನಂಬಿಕೆ ಇಟ್ಟು ಮುಂದೆ ಹೋದಂತೆ, ಪ್ರತಿಯೊಂದು ಅನುಭವ ನಿಮಗೆ ಪಾಠವನ್ನೇ ಕಲಿಸುತ್ತದೆ.
ನೀವು ನಿಮ್ಮ "ಕೊಡೆ" ಹಿಡಿದು ನಡೆಯಲು ಸಿದ್ಧರಿದ್ದೀರಾ? ನಿಮ್ಮ ಅನಿಶ್ಚಿತ ಜೀವನದಲ್ಲಿ ವಿಶ್ವಾಸದಿಂದ ಹೇಗೆ ಮುಂದುವರೆಯಲು ಯೋಚಿಸುತ್ತಿದ್ದೀರಿ ಎನ್ನುವುದನ್ನು ಹಂಚಿಕೊಳ್ಳಿ!
#ವಿಶ್ವಾಸ #ಆತ್ಮವಿಕಾಸ #ಬೆಳವಣಿಗೆ #ವೈಯಕ್ತಿಕವಿಕಾಸ #ನಾಯಕತ್ವ #ಧೈರ್ಯ